Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ರಜೆ ಇದ್ರೂ ಕರ್ತವ್ಯಕ್ಕೆ ಹಾಜರ್‌ ಎಸಿಪಿ ಚಂದನ್‌ ಕುಮಾರ್..!

ಕರುನಾಡು ಘರ್ಜನೆ ಸುದ್ದಿ ಬೆಂಗಳೂರು : ಇತ್ತೀಚೆಗೆ ರೈಲಿನಲ್ಲಿ ನಾಯಿ ಮಾಂಸ ಬರ್ತಾ ಇದೆ ಅಂತ ಪುನೀತ್ ಕೆರೆಹಳ್ಳಿ ರೈಲ್ವೆ ಸ್ಟೇಷನ್ ಬಳಿ ಹೋಗಿ ಪ್ರತಿಭಟನೆ ಮಾಡಿ ಅರೆಸ್ಟ್ ಆಗಿದ್ದ. ಅವತ್ತು ರೌಂಡ್ಸ್ ನಲ್ಲಿದ್ದ ಎಸಿಪಿ ಚಂದನ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿನ…

ಕರುನಾಡು ಘರ್ಜನೆ ಸುದ್ದಿ ಬೆಂಗಳೂರು : ಇತ್ತೀಚೆಗೆ ರೈಲಿನಲ್ಲಿ ನಾಯಿ ಮಾಂಸ ಬರ್ತಾ ಇದೆ ಅಂತ ಪುನೀತ್ ಕೆರೆಹಳ್ಳಿ ರೈಲ್ವೆ ಸ್ಟೇಷನ್ ಬಳಿ ಹೋಗಿ ಪ್ರತಿಭಟನೆ ಮಾಡಿ ಅರೆಸ್ಟ್ ಆಗಿದ್ದ. ಅವತ್ತು ರೌಂಡ್ಸ್ ನಲ್ಲಿದ್ದ ಎಸಿಪಿ ಚಂದನ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿನ ನಗ್ನ ಮಾಡಿ ಹಲ್ಲೆ ಮಾಡಿದ್ದಾರೆ ಅಂತ ಆರೋಪ‌ ಮಾಡಿದ್ದ. ಇದೇ ಆರೋಪದಿಂದ ಪ್ರತಾಪ್ ಸಿಂಹ ಎಸಿಪಿಗೆ ನಿಮ್ಮ ಕಚೇರಿಗೆ ಬರ್ತಾ ಇದ್ದೀನಿ ನೀವು ಇರಬೇಕು ಅಂತಾ ಚಾಲೆಂಜ್‌ ಹಾಕಿದ್ದರು. ಸದ್ಯ ಚಾಲೆಂಜ್ ಸ್ವೀಕರಿಸಿದ ಎಸಿಪಿ ರಜೆಯಲ್ಲಿದ್ರೂ ಕೆಲಸಕ್ಕೆ ಹಾಜರಾಗಿ ಟಕ್ಕರ್ ನೀಡಿದ್ದಾರೆ.

ಎಸಿಪಿ ಚಂದನ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೀರೋ ಆಗಿದ್ದವರು. ಯಾಕಂದ್ರೆ ನಟ ದರ್ಶನ್‌ನ ಇದೇ ಎಸಿಪಿ ಚಂದನ್ ಅರೆಸ್ಟ್ ಮಾಡಿದ್ರು. ಈ ಎಸಿಪಿ ವಿರುದ್ದ ಈಗ ಒಂದು ಆರೋಪ ಬಂದಿದೆ. ಇತ್ತೀಚೆಗೆ ನಾಯಿ ಮಾಂಸ ಬರ್ತಾ ಇದೆ ಅಂತ ಪುನೀತ್ ಕೆರೆಹಳ್ಳಿ ರೈಲ್ವೆ ಸ್ಟೇಷನ್ ಬಳಿ ಪ್ರತಿಭಟನೆ ಮಾಡಿದ್ದ. ಈ ವೇಳೆ ಬಂಧನ ಮಾಡಿದ್ದು ಎಸಿಪಿ ಚಂದನ್ ನಗ್ನ ಮಾಡಿ ಹಲ್ಲೆ ಮಾಡಿದ್ದು, ಅಷ್ಟೇ ಅಲ್ಲದೆ ವಿಡಿಯೋ ಮಾಡ್ಕೊಂಡು ವೈರಲ್ ಮಾಡ್ತೀನಿ ಅಂದ್ರು ಅಂತ ಖುದ್ದು ಕೆರೆಹಳ್ಳಿನೆ ಹೇಳಿದ್ದ.

ಇದ್ರಿಂದ ಆಕ್ರೋಶಗೊಂಡ ಮಾಜಿ ಸಂಸದ ಪ್ರತಾಪ್ ಸಿಂಹ ನಿನ್ನೆ ಎಕ್ಸ್ ನಲ್ಲಿ ಎಸಿಪಿಗೆ ಒಂದು ಪೋಸ್ಟ್ ಹಾಕಿದ್ರು. ನಾನು ನಿಮ್ಮ ಕಚೇರಿಗೆ ಬರ್ತಾ ಇದ್ದೀನಿ ನೀವು ಇರಬೇಕು ಅಂದಿದ್ದ. ಇದನ್ನ ಚಾಲೆಂಜ್ ಆಗಿ ತಗೊಂಡ ಎಸಿಪಿ ಚಂದನ್ ರಜೆ ಇದ್ದರು ಇವತ್ತು ಕೆಲಸಕ್ಕೆ ಹಾಜರಾಗಿದ್ರು. ಇತ್ತ ಎಸಿಪಿ ಕಚೇರಿಗೆ ಬಂದಿದ್ದೇ ಮಾಜಿ ಸಂಸದ ಪ್ರತಾಪ್ ಸಿಂಹ, ಬೆಳ್ತಂಗಡಿ‌ ಶಾಸಕ ಹರೀಶ್ ಪೂಂಜಾ, ಪುನೀತ್ ಕೆರೆಹಳ್ಳಿ ಸೇರಿ ನೂರಾರು‌ ಹಿಂದೂ ಕಾರ್ಯಕರ್ತರು ಬಸವೇಶ್ವರ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ರು.

 

 

ಎಸಿಪಿ ವಿರುದ್ದ ಘೋಷಣೆಗಳನ್ನು ಕೂಗಿದ್ರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದರು. ಇದಾದ ಬಳಿಕ ಡಿಸಿಪಿ ಶೇಖರ್‌ಗೆ ದೂರು ನೀಡಿದ್ದು, ದೂರಿನಲ್ಲಿ ಎಸಿಪಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜೊತೆಗೆ ಅಬ್ದುಲ್ ರಜಾಕ್ ವಿರುದ್ದ ಯಾಕೆ ಎಫ್‌ಐಆರ್ ಮಾಡಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ದೂರು ಸ್ವೀಕರಿಸಿದ ಡಿಸಿಪಿ ಪರಿಶೀಲನೆ ಮಾಡೋದಾಗಿ ಹೇಳಿದ್ದಾರೆ.ಇನ್ನೂ ಇದೇ ವೇಳೆ ಮಾತನಾಡಿದ ಪುನೀತ್ ಕರೆಹಳ್ಳಿ ಎಸಿಪಿ ಚಂದನ್ ಮೇಲೆ ಹಲ್ಲೆ ಆರೋಪ ಮಾಡಿದ್ರು. ಠಾಣೆಗೆ ನನ್ನ ಎಳೆದೋಯ್ದು ಒಂದು ಕೋಣೆಯಲ್ಲಿ ಹಾಕಿದ್ರು. ಆಗ ಎಸಿಪಿ ಚಂದನ್ ಬಂದು ನನ್ನ ಯಾಕ್ ಮಲಗಿಸಿದ್ದಾರ ಅಂತಾ ಸಿಬ್ಬಂದಿನ‌ ಕೇಳಿ ಲಾಠಿಯಿಂದ ಹಲ್ಲೆ ನಡೆಸಿದ್ರು. ನನ್ನ ಬಟ್ಟೆ ಬಿಚ್ಚಿಸಿ ಸಂಪೂರ್ಣವಾಗಿ ಬೆತ್ತಲು‌ಮಾಡಿ ಈ ವಿಚಾರವನ್ನ ಮಾಧ್ಯಮದ ಮುಂದೆ ಹೇಳಿಕೊಂಡ್ರೆ ನಿನ್ನ ಮರ್ಯಾದೆ ಹೋಗುತ್ತೆ ಅಂತ ಧಮ್ಕಿ ಹಾಕಿದ್ರು. ಇದೇ ಕಾರಣಕ್ಕೆ ನಾನು ಕಮಿಷನರ್ ಗೆ ದೂರು ನೀಡಿದ್ದೇನೆ ಎಂದಿದ್ದಾರೆ..

ಒಟ್ಟಿನಲ್ಲಿ ಇವತ್ತು ಬಸವೇಶ್ವರ ನಗರ ಠಾಣೆ ಬಳಿ ಹೈಡ್ರಾಮಾನೇ ನಡೀತು. ‌ಇತ್ತ ಎಸಿಪಿ ಕೂಡ ಕರ್ತವ್ಯಕ್ಕೆ ಹಾಜರಾಗಿದ್ದು ಪ್ರತಾಪ್ ಸಿಂಹ ಪೋಸ್ಟ್‌ಗೆ ಟಕ್ಕರ್ ನೀಡಿದ್ದಾರೆ.

Editor

Leave a comment